Inhouse product
ಪ್ರೊಫೆಸರ್ ಎಂ.ಎಚ್. ಕೃಷ್ಣಯ್ಯನವರ `ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ'ಯ ವ್ಯಾಪ್ತಿ ಅದರ ಹೆಸರು ಸೂಚಿಸುವುದಕ್ಕಿಂತ ಹೆಚ್ಚಿನದು. ಮೊದಲ ಆರು ಅಧ್ಯಾಯಗಳಲ್ಲಿ ಭಾಷೆಯ ಅಧ್ಯಯನಕ್ಕೆ ಅಗತ್ಯವಾದ ಹಿನ್ನೆಲೆಯನ್ನು ರೂಪಿಸಿದ್ದಾರೆ. ಕನ್ನಡ ಭಾಷೆ ನಡೆದು ಬಂದ ದಾರಿಯನ್ನು ಕೃತಿಯು ಹಂತ ಹಂತವಾಗಿ ಗುರುತಿಸುತ್ತದೆ. ಲಿಪಿ, ಶಬ್ದಸಂಪತ್ತು, ವ್ಯಾಕರಣ ಎಲ್ಲ ಅಂಗಗಳ ಬೆಳವಣಿಗೆಯನ್ನು ಶಾಸ್ತ್ರೀಯವಾಗಿ ಚಾರಿತ್ರಿಕ ದೃಷ್ಟಿಯಿಂದ ಪ್ರೊ. ಕೃಷ್ಣಯ್ಯ ವಿವರಿಸುತ್ತಾರೆ. ಅಡಕತನ, ಖಚಿತತೆ, ಸ್ಫುಟತ್ವ ಇವು ಪ್ರೊ. ಕೃಷ್ಣಯ್ಯನವರ ನಿರೂಪಣೆಯ ಗುಣಗಳು.-ಪ್ರೊ.ಎಲ್.ಎಸ್. ಶೇಷಗಿರಿರಾವ್